SALAAR- TEASER
ಪ್ರಭಾಸ್ ನಟನೆಗೆ ಪ್ರೇಕ್ಷಕ ಪಿದಾ - ಸಲಾರ್ ಟೀಸರ್ ಗೆ ಮೆಚ್ಚುಗೆ
ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್ ಭಾಗ-1' ಚಿತ್ರದ ಟೀಸರ್ ಜುಲೈ ೬ ರಂದು ಮುಂಜಾನೆ 5.12ಕ್ಕೆ ಬಿಡುಗಡೆಗೊಂಡಿದ್ದು, ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಎರಡು ಭಾಗಗಳಲ್ಲಿ ಚಿತ್ರ ಬಿಡುಗಡೆಯಾಗುವ ಬಗ್ಗೆ ಟೀಸರ್‌ನಲ್ಲಿ ಚಿತ್ರತಂಡ ಬಹಿರಂಗಗೊಳಿಸಿದೆ. ಇಂದು ಬಿಡುಗಡೆಯಾದ 'ಸಲಾ ಭಾಗ 1- ಸೀಸ್‌ಫಿಯ ಟೀಸರ್‌ನಲ್ಲಿ ಪ್ರಭಾಸ್ ಅವರನ್ನು ಜುರಾಸಿಕ್ ಪಾರ್ಕ್‌ನ ಭಯಾನಕ ಡೈನೋಸರ್‌ಗೆ ಹೋಲಿಸಲಾಗಿದೆ. ಟೀಸರ್‌ನಲ್ಲಿ ಟಿನ್ನು ಆನಂದ್ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಟಿನ್ನು ಆನಂದ್ ಕೆಜಿಎಫ್-2ನ ಸಂಜಯ್ ದತ್ ಅವರರನ್ನು ನೆನಪಿಸುತ್ತಾರೆ.
ಕೆಜಿಎಫ್ ಚಿತ್ರವನ್ನು ನೆನಪಿಸುವ ಟೀಸರ್, ಮಾಸ್ ಡೈಲಾಗ್‌ನೊಂದಿಗೆ ಪ್ರಾರಂಭವಾಗುತ್ತದೆ. ರವಿ ಬಸೂರು ಬ್ಯಾಕ್ ರೌಂಡ್ ಮ್ಯೂಸಿಕ್ ಟೀಸರ್‌ಗೆ ಮತ್ತಷ್ಟು ಖದರ್ ನೀಡಿದೆ.
ಟೀಸರ್‌ನ ಅರ್ಧ ಭಾಗದಲ್ಲಿ ಪ್ರಭಾಸ್ ಮತ್ತು ಪ್ರಥ್ವಿ ಸುಕುಮಾರನ್ ಕಾಣಿಸಿಕೊಳ್ಳುತ್ತಾರೆ. ಆದಿಪುರುಷ ಚಿತ್ರದಲ್ಲಿ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದ ಪ್ರಭಾಸ್ ಇಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ಟೀಸರ್‌ನ ಪ್ರತಿಹಂತದಲ್ಲೂ ಪ್ರಶಾಂತ್ ನೀಲ್ ಮೇಕಿಂಗ್ ಸ್ಟೈಲ್ ಗೋಚರಿಸುತ್ತದೆ.
`ಆದಿಪುರುಷ' ಚಿತ್ರ ಬಿಡುಗಡೆಯಾದ ವಾರಗಳ ನಂತರ ಸಲಾರ್ ಟೀಸರ್ ಬಿಡುಗಡೆಯಾಗಿದ್ದು, ಅದರ ಸೋಲಿನಿಂದ ಹೊರಬರಲು ಪ್ರಭಾಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಎರಡು ನಿಮಿಷದ ಈ ಟೀಸರ್‌ನಲ್ಲಿ ಟಿನ್ನು ಆನಂದ್ ಅವರು ರೌಡಿಗಳ ಮಧ್ಯೆ ನಿಂತು ಸರಳ ಇಂಗ್ಲೀಷ್‌ನಲ್ಲಿ ಡೈಲಾಗ್ ಹೊಡೆಯುತ್ತಾರೆ. 'ಲಯನ್, ಚೀತಾ, ಟೈಗರ್ ಅಂಡ್ ಎಲಿಫೆಂಟ್ ಆರ್ ದ ಮೋಸ್ಟ್ ಡೆಂಜರಸ್ ಅನಿಮಲ್ಸ್. ಬಟ್ ನಾಟ್ ಇನ್ ಜುರಾಸಿಕ್ ಪಾರ್ಕ್. ದ ಒನ್ ದೇರ್ ಇಸ್ ದ್ಯಾಟ್ ಡೈನೋಸಾರ್, ವಿಚ್ ಇಸ್ ದ ಮೋಸ್ಟ್ ವಯ್‌ಲೆಂಟ್ ಕ್ರಿಯೆಟ್ ದ ಅರ್ಥ್ ಹ್ಯಾಸ್ ಸೀನ್ ಎವರ್ ಎಂಬ ಡೈಲಾಗ್ ಮೂಲಕ ಟೀಸರ್ ಸಾಗುತ್ತದೆ.
ಇದರ ನಡುವೆ ಪ್ರಭಾಸ್ ಗನ್ ಹಿಡಿದು ಹೋರಾಟ ಮಾಡುವ ದೃಶ್ಯಗಳು ಕಾಣಿಸುತ್ತದೆ. ಪ್ರಭಾಸ್ ಅವರ ಖದರ್ ಲುಕ್, ಗನ್ ಹಿಡಿಯುವ ಪರಿ ಗಮನ ಸೆಳೆದಿದೆ.
Post a Comment