Gajendragad :
ಗಜೇಂದ್ರಗಡದಾದ್ಯಂತ ಜಿಟಿಜಿಟಿ ಮಳೆ : ರೈತರ ಮೊಗದಲ್ಲಿ ಮಂದಹಾಸ
ಗಜೇಂದ್ರಗಡದಾದ್ಯಂತ ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಮಳೆ ಇಲ್ಲದೇ ರೈತರು ಕಂಗಾಲಾಗಿದ್ದರು. ಹಲವರು ದೇವರ ಮೊರೆ ಹೋಗಿದ್ದರು. ಈಗ ಬೀತ್ತನೆಗೆ ಬೇಕಾಗುವಷ್ಟು ಮಳೆಯಾಗಿದೆ ಎಂದರೆ ತಪ್ಪಾಗಲ್ಲ. ಕೆಲವೆಡೆ ಬಿತ್ತನೆ ಇಲ್ಲದೇ ಬಿಕೋ ಎನ್ನುತ್ತಿದ್ದ ಭೂಮಿಯಲ್ಲಿ ರೈತ ಸಂತಸದಿಂದ ಬಿತ್ತನೆ ಮಾಡುತ್ತಿದ್ದಾರೆ. ರೈತರ ಮೊಗದಲ್ಲಿ ಸ್ವಲ್ಪ ಮಂದಹಾಸಮೂಡಿದೆ. ಕೃಷಿ ಚಟುವಟಿಕೆ ಗರಿಗೆದರಿವೆ. ಮತ್ತೊಂದೆಡೆ ಜಿಟಿಜಿಟಿ ಮಳೆಯಿಂದ ಭೂಮಿ ತಂಪಾಗಿದೆ. ತಣ್ಣನೆಯ ಗಾಳಿ ಹದವಾದ ವಾತಾವರಣ ಕಂಡು ಬರುತ್ತಿದೆ. ಮಂಗಳವಾರ ಗಜೇಂದ್ರಗಡದಲ್ಲಿ ಸೂರ್ಯನ ಮುಖ ನೋಡಲಾಗಲಿಲ್ಲ. ಮೊಡ ಕವಿದ ವಾತಾವರಣ ಎಲ್ಲೆಡೆ ಇದೆ. ಇತ್ತ, ರೋಣ ತಾಲೂಕಿನಾದ್ಯಂತ ಸಹ ಇದೆ ಪರಿಸ್ಥಿತಿ ಇದೆ. ಕೆಲವೆಡೆ ಬಿತ್ತನೆಗೆ ರೈತ ತಯಾರಿ ನಡೆಸಿದ್ದಾನೆ.ಮತ್ತೆ ಕೆಲವೆಡೆ ಹೆಸರು ಬೆಳೆಗೆ ಜಿಟಿಜಿಟಿ ಮಳೆಗೆ ರೋಗ ಬಂದಂತಾಗಿದೆ ಎಂದು ರೈತರು ಗೋಳಾಡುತ್ತಿದ್ದುದು ಕಂಡು ಬಂದಿದೆ.
ಅದೇನೇ ಇರಲಿ ಮಳೆ ಇಲ್ಲದೇ, ಗಾಲಾಗಿದ್ದ ರೈತ ಸದ್ಯ ಸಂತಸದಲ್ಲಿದ್ದಾನೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾದರೇ, ಮಾತ್ರ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ. ಮುಂಗಾರು ಮಳೆಯ ಕೊರತೆ ಎದುರಾಗಿದ್ದ ಸಂಧರ್ಭದಲ್ಲಿ ಜಿಟಿಜಿಟಿ ಮಳೆಯಿಂದ ರೈತ ಕೊಂಚ ಸಂತಸದಲ್ಲಿದ್ದಾನೆ.
Post a Comment