Gajendragad :
ಕಿಡಗೇಡಿಗಳ ಕೃತ್ಯಕ್ಕೆ ಗೊಡಂಬಿ ಬೆಳೆ ಬೆಂಕಿಗಾಹುತಿ : ಪ್ರವಾಸಿಗರು ಎಚ್ಚರಿಕೆ ವಹಿಸುವುದು ಒಳಿತು
ಗಜೇಂದ್ರಗಡ ಗುಡ್ಡದ ಮೇಲೆ ರೈತರ ತೋಟಗಳು ಇವೆ. ಅವರ ತೋಟಗಳಿಗೆ ಹೋಗಿ ಉಳುಮೆ ಮಾಡಲು, ರಸ್ತೆಯೇ ಇಲ್ಲ. ಅಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಲಂಬಾಣಿ ಜನಾಂಗದರೇ ಇದ್ದಾರೆ. ಈ ಗುಡ್ಡದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಬೆಂಕಿಯ ಕೆನ್ನಾಲಗೆಗೆ ರೈತರು ಬೆಳೆದ ಬೆಳೆಗಳು ನಾಶವಾಗುತ್ತದೆ. ಗುಡ್ಡದ ಮೇಲೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶದ ಈಶಪ್ಪ ಪಾಂಡಪ್ಪ ರಾಠೋಡ್ ಅವರ ಪಿತ್ರಾರ್ಜಿತ ಆಸ್ತಿಯೂ ಇದೆ. ಅವರ ಪಿತ್ರಾರ್ಜಿತ ಆಸ್ತಿ ಉಳಿಸಿಕೊಂಡು ಹೋಗುವುದು ಕಷ್ಟವಾಗಿದೆ. ಯಾಕೆ ಅಂದ್ರೆ, ಗುಡ್ಡದ ಮೇಲೆ ಸರಿಯಾದ ರಸ್ತೆ ಮಾರ್ಗ ಇಲ್ಲ. ಅಲ್ಲಿ ಹೋಗುವುದು ಎಂದರೆ, ಕಾಡಿನಲ್ಲಿ ವೀರಪ್ಪನ್ ಹುಡುಕಲು ಹೋದ ಅನುಭವಗಾಗುತ್ತದೆ ಎಂದರೆ ತಪ್ಪಾಗಲ್ಲ.
ಇಂತಹ ಪರಿಸ್ಥಿತಿಯಲ್ಲಿ ಗುಡ್ಡ ಮೇಲಿನ ತಮ್ಮ ತೋಟವನ್ನ ಉಳಿಸಲು ಈಶಪ್ಪ ರಾಠೋಡ್ ಸುಮಾರು ೬೦೦ ಗೊಡಂಬಿ ಗಿಡಗಳನ್ನ ತಂದು ಅವುಗಳ ಪಾಲನೆ ಪೋಷಣೆ ಮಾಡುತ್ತಾರೆ. ಈ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರುಣಿಸಿದ್ದಾರೆ. ಮಕ್ಕಳಿಗೂ ಸಹ ಇಷ್ಟೊಂದು ಆರೈಕೆ ಮಾಡಿಲ್ಲ. ಅಷ್ಟು ಆರೈಕೆ ಮಾಡಿದರೂ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಎಂದುಕೊಂಡಂತೆ ನಡೆದಿದ್ದರೇ, ಈಗ ಅತ್ತುತ್ತಮ ಫಸಲು ಕೈ ಸೇರುತ್ತಿತ್ತು. ಆದ್ರೆ, ಕಳೆದ ಬೇಸಿಗೆಯಲ್ಲಿ ಯಾರೋ ಕಿಡಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಬೆಂಕಿ ಕೆನ್ನಾಲಗೆಗೆ ಸುಮಾರು ೩೦೦ ಗಿಡಗಳು ಜೀವನ್ಮರಣದ ನಡುವೆ ಹೋರಾಟ ನಡೆಸಿವೆ.
ಈಗ ಮಳೆಗಾಲವಾದ್ದರಿಂದ ಕೆಲ ಗೊಡಂಬಿ ಗಿಡಗಳು ಮತ್ತೆ ಚಿಗುರೊಡೆದಿವೆ. ಲಕ್ಷಾಂತರ ರೂಪಾಯಿ ವ್ಯಯಿಸಿ, ಕಾಳಜಿ ವಹಿಸಿ ಬೆಳೆದ ಗಿಡಗಳು ಕಣ್ಮುಂದೆಯೇ ಸುಟ್ಟು ಕರಕಲಾದಾಗ, ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಶ್ರಮ ವಹಿಸಿದ್ದರು.
ಮೋಜು ಮಸ್ತಿಗಾಗಿ ಬರುವ ಕೆಲ ಪ್ರವಾಸಿಗರು ಬೀಡಿ, ಸಿಗರೇಟು ಸೇದುತ್ತಾರೆ. ಅದರಿಂದ ತಗುಲಿರಬಹುದೆಂದು ಶಂಕಿಸಲಾಗಿದೆ. ಯಾಕೆ ಅಂದ್ರೆ, ಇಲ್ಲಿ ಪವನ ವಿದ್ಯುತ್‌ನ ಗಾಳಿ ಯಂತ್ರಗಳು ಕೆಸಲ ನಿರ್ವಹಿಸುತ್ತವೆ. ಇಲ್ಲಿ ಕೆಲ ಕೆಲಸಗಾರರು ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಾರೆ. ಅವರೂ ಇಂತಹ ಕೃತ್ಯ ವೆಸಗಲು ಸಾಧ್ಯ ವಿಲ್ಲ. ಇನ್ನೂ, ಕುರಿಗಾಹಿಗಳು, ದನ ಮೇಯಿಸುವವರು ಇಂತಹ ಕೃತ್ಯ ನಡೆಸಲು ಸಾಧ್ಯ ವಿಲ್ಲ. ಅವರ ದನ, ಕರುಗಳಿಗೆ ಮೇಯಿಸಲು ಮೇವುಗಳು ಸಿಗುತ್ತದೆ. ಹೀಗಾಗಿ, ಅವರಿಂದ ಕೃತ್ಯ ನಡೆಯಲು ಸಾಧ್ಯ ವಿಲ್ಲ ಎಂದು ಹೇಳುತ್ತಾರೆ ಈಶಪ್ಪ ರಾಠೋಡ್. ಈ ಗೊಡಂಬಿ ಬೆಳೆಗೆ ಬೆಳೆ ನಾಶಕ್ಕೆ ಪರಿಹಾರ ಸಿಗುವುದಿಲ್ಲ. ನಮ್ಮ ಭಾಗದಲ್ಲಿ ಗೊಡಂಬಿ ಬೆಳೆ ಬೆಳೆಯುವುದು ಬೆರಳೆಣಿಕೆಯಷ್ಟು ರೈತರು ಮಾತ್ರ. ಇಂತಹ ರೈತರ ಸಾಲಿಗೆ ಸೇರುತ್ತಾರೆ ಈಶಪ್ಪ. ಗುಡ್ಡದ ಮೇಲೆ ಸರಿಯಾದ ರಸ್ತೆ ಸಂಪರ್ಕ ಬೇಕಿದೆ. ಅಲ್ಲಿ ಕೆಲ ನಿರ್ವಹಿಸುವವರಿಗೆ, ರೈತರಿಗೆ, ಪ್ರವಾಸಿಗರಿಗೆ ರಸ್ತೆ ಬಹುಮುಖ್ಯವಾಗಿ ಬೇಕು. ಆದ್ರೆ, ರಸ್ತೆ ಸಂಪರ್ಕವೇ ಇಲ್ಲದೇ, ತಮ್ಮ ಜಮೀನನ್ನ ರಕ್ಷಣೆ ಮಾಡಿಕೊಳ್ಳುವುದು ಕಷ್ಟಕರವಾಗಿದೆ.
ಮುಂಬರುವ ದಿನಗಳಲ್ಲಿ ಪ್ರವಾಸಿತಾಣ ವಾಗಿ ಬದಲಾದ್ರೆ, ಪ್ರವಾಸಿಗರು ಬಂದು ವಿಹರಿಸಲು, ಕುಳಿತು ಕೊಳ್ಳಲು ಅನುಕೂಲ ಮಾಡಿಕೊಡುವ ಇರಾದೆಯೊಂದಿಗೆ ಗಾರ್ಡ್ನ್ ಮಾಡುವ ಮನದಾಳ ವನ್ನ ಹಂಚಿಕೊಂಡಿದ್ದಾರೆ.
ಪ್ರವಾಸಿಗರು ತೆರಳುವಾಗ ಎಚ್ಚರಿಕೆ ವಹಿಸಿ, ತಮ್ಮ ತಮ್ಮ ಮೋಜು ಮಸ್ತಿಗಾಗಿ ರೈತರ ತೋಟಗಳು ಬೆಂಕಿಗೆ ಆಹುತಿಯಾಗುತ್ತಿವೆ ಎಂದು ಕಿರಾ ನ್ಯೂಸ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.
Post a Comment