-->
Bookmark

Gajendragad : ನೆಲ್ಲೂರು ಗ್ರಾಮದಲ್ಲಿ ಶಾಸಕ ಜಿ.ಎಸ್ ಪಾಟೀಲ್ ಅವರಿಗೆ ತುಲಾಭಾರ - ಹರಕೆ ಈಡೇರಿಸಿದ ಅಭಿಮಾನಿ ನವೀನಕುಮಾರ ರಾಠೋಡ್

Gajendragad : 
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನೆಲ್ಲೂರು ಗ್ರಾಮದಲ್ಲಿ ಶಾಸಕ ಜಿ.ಎಸ್ ಪಾಟೀಲ್ ಅವರಿಗೆ ತುಲಾಭಾರ - ಹರಕೆ ಈಡೇರಿಸಿದ ಅಭಿಮಾನಿ ನವೀನಕುಮಾರ ರಾಠೋಡ್
ಹಿಂದು-ಮುಸ್ಲೀಂ ಭಾವೈಕ್ಯತೆಯ ಸಂಕೇತವೇ ಮೊಹರಂ ಹಬ್ಬ. ಹಲವು ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನ ಹಿಂದು ಬಾಂಧವರು ಹೆಚ್ಚಾಗಿ ಆಚರಿಸುತ್ತಾರೆ. ತಮ್ಮ ಆರಾಧ್ಯ ದರ್ಗಾಗಳಲ್ಲಿ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ, ನೆಲ್ಲೂರು ಗ್ರಾಮದ ನವೀನಕುಮಾರ್ ರಾಠೋಡ್, ಜಿ.ಎಸ್. ಪಾಟೀಲ್ ಅವರು ಶಾಸಕರಾಗಿ ಆಯ್ಕೆಯಾದ್ರೆ, ತುಲಾಭಾರ ಮಾಡುವುದಾಗಿ ಬೇಡಿಕೊಂಡಿದ್ದರು. ಇದು ಚುನಾವಣೆಗೂ ಮುನ್ನವೇ ಬೇಡಿಕೊಂಡ ಬೇಡಿಕೆಯಾಗಿತ್ತು. ಚುನಾವಣೆಯಲ್ಲಿ ಶಾಸಕರು ಅಭೂತಪೂರ್ವ ಗೆಲುವು ದಾಖಲಿಸಿ, ಇತಿಹಾಸ ನಿರ್ಮಿಸಿದ್ದರು. ಜುಲೈ ೨೮ರ ಮೊಹರಂನ ಕತ್ತಲ ರಾತ್ರಿಯಂದು ಜಿ.ಎಸ್ ಪಾಟೀಲ್ ಅವರ ತುಲಾಭಾರ ಕಾರ್ಯಕ್ರಮ ನಡೆಯಿತು. ಒಂದೆಡೆ, ಶಾಸಕ ಜಿ.ಎಸ್. ಪಾಟೀಲ್ ಅವರು ಇದ್ರೆ, ಮತ್ತೊಂದೆಡೆ, ಬೆಲ್ಲವನ್ನ ಇಡಲಾಯ್ತು. 
 ನೆಲ್ಲೂರಿನ ಜನರ ಆರಾಧ್ಯ ದೈವ ವಾಗಿರುವ ಮೌಲಾಲಿ ದರ್ಗಾದಲ್ಲಿ ಹರಕೆ ತೀರಿಸಿದರು. ಇಲ್ಲಿ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇತ್ತು. ಈಗ ಜಿ.ಎಸ್. ಪಾಟೀಲ್ ಅವರ ಮೇಲೆ ಅಪಾರ ಗೌರವವಿದ್ದು, ನಾವು ಅವರ ಗೆಲುವಿಗಾಗಿ, ವಿಶೇಷ ಹರಕೆ ಹೊತ್ತಿದ್ವಿ, ಈಗ ನಮ್ಮ ಬೇಡಿಕೆ ಈಡೇರಿದೆ. ಎಂದು ಸಂತಸ ವ್ಯಕ್ತಪಡಿಸಿದರು. 
ಇದೇ ವೇಳೆ, ಮಾತನಾಡಿದ ಶಾಸಕ ಜಿ.ಎಸ್. ಪಾಟೀಲ್ ಅವರು, ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಿ ಎಂದು ಹಬ್ಬದ ಶುಭಾಶಯ ತಿಳಿಸಿದರು.

ವನೀನ್ ರಾಠೋಡ್, ಸತ್ಯಪ್ಪ ಓಲೇಕಾರ್, ನೆಲ್ಲೂರು ಗ್ರಾಮದ ಕಾಂಗ್ರೆಸ್ ಮುಖಂಡರು, ಗುರು ಹಿರಿಯರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು.

ತುಲಾಭಾರ ಕಾರ್ಯಕ್ರಮಕ್ಕೆ ಬಳಕೆಯಾದ ಬೆಲ್ಲವನ್ನ ಸಮಾಜಕ್ಕೆ ನೀಡಲಾಯ್ತು.
Post a Comment

Post a Comment