-->
Bookmark

Gajendragad : ತಾಲೂಕಿನಾದ್ಯಂತ ಉತ್ತಮ ಮಳೆ - ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತ

Gajendragad : ತಾಲೂಕಿನಾದ್ಯಂತ ಉತ್ತಮ ಮಳೆ - ಸಂತಸದಲ್ಲಿ ರೈತ ಕೃಷಿ ಚಟುವಟಿಕೆ 

ಸತತ ಕಳೆದ ಮೂರು ದಿನಗಳಿಂದ ಗಜೇಂದ್ರಗಡದಾದ್ಯಂತ ಮಲೆಯಾಗುತ್ತಿದೆ. ಕೆಲವೆಡೆ ಮಳೆಯಲ್ಲೆ ಬಿತ್ತನೆ ಕಾರ್ಯ ನಡೆದಿದೆ. ಮತ್ತೆ ಕೆಲವೆಡೆ ಬೆಳೆದ ಬೆಳೆಗೆ, ಜಿಟಿಜಿಟಿ ಮಳೆಯಲ್ಲೆ ರೈತರು ಗೊಬ್ಬರ ಹಾಕಿದ್ದಾರೆ. 
ಕಾಲಕಾಲೇಶ್ವರ ವ್ಯಾಪ್ತಿಯಲ್ಲಿ ರೈತ ನಿಂಗಪ್ಪ ಯಲಬುರ್ಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ರೈತರು ಸಂತಸದಲ್ಲಿದ್ದಾರೆ. ಈ ವೇಳೆ ಮಾತನಾಡಿದ ನಿಂಗಪ್ಪ ಅವರು, ದಕ್ಷಿಣ ಕಾಶಿ ಕಾಲಕಾಲೇಶ್ವರ ದೇವರ ಕೃಪೆಯಿಂದ ಮಳೆಯಾಗುತ್ತಿದೆ. ಈ ಭಾಗದ ಆರಾದ್ಯ ದೈವ ತಲೆತಲಾಂತರಗಳಿಂದ ನಮ್ಮನ್ನ ರಕ್ಷಿಸುತ್ತಾ ಬಂದಿದ್ದಾನ. ನಮ್ಮ ಕಷ್ಟಗಳನ್ನ ದೂರ ಮಾಡುತ್ತಾ ಬಂದಿದ್ದಾರೆ. ಹೀಗಾಗಿ, ನಮ್ಮ ಕಷ್ಟಕ್ಕೆ ದೇವರು ಮಳೆ ತರಿಸಿದ್ದಾನೆ ಎಂದು ರೈತ
ನಿಂಗಪ್ಪ ಯಲಬುರ್ಗಿ‌ ತಮ್ಮ ಮನದಾಳ ಹಂಚಿಕೊಂಡಿದ್ದಾರೆ,
ಇನ್ನೂ ಮತ್ತೊಬ್ಬ ರೈತರಾದ ರೇಣುಕಾ ಗಂಗಪ್ಪ ಮಾಲಗಿತ್ತಿ ಮಾತನಾಡಿ, ನಾವು ರೈತರು. ಹೊಟ್ಟೆ ಪಾಡಿಗಾಗಿ ಕೆಲಸ ಮಾಡುತ್ತೇವೆ. ಆದ್ರೆ, ಭೂತಾಯಿ ನಂಬಿದರೆ, ಯಾವತ್ತು ಕೈ ಬಿಡುವುದಿಲ್ಲ‌. ನಾವು ಭೂಮಿಯನ್ನ ನಂಬಿದ ರೈತರು ಎಂದು ರೈತರಾದ ರೇಣುಕಾ ಹೇಳಿದ್ರು... 
ಇತ್ತ, ರೈತ ಮಹಿಳೆ ರಾಜಮ್ಮ ಆನಿ ಮಾತನಾಡಿ, ಚಿಕ್ಕವರಿದ್ದಾಗಿನಿಂದ ಹೊಲದಲ್ಲೆ ಕೆಲಸ ಮಾಡುತ್ತೇವೆ. ಇಂದಿಗೂ ಇದೆ ಕಾಯಕ ಮುಂದುವರೆದಿದೆ ಎಂದು ರಾಜಮ್ಮ ಹೇಳಿದರು...
ಅದೇನೇ ಇರಲಿ ಬರದಲ್ಲಿ ಬೆಂದು ಬೆಂಡಾಗಿದ್ದ ರೈತರು ಕೃಷಿ ಕಟುವಟಿಕೆಯಲ್ಲಿ ತೊಡಗಿರುವುದು ಸಂತಸ, ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ‌ ನಿರೀಕ್ಷೆಯಲ್ಲಿದ್ದಾರೆ ರೈತರು...
Post a Comment

Post a Comment