Gajendragad : ( ಹಾಲಕೆರೆ )
ಉಚಿತ ಆರ್ಮಿ ಕೋಚಿಂಗ್ : ಅನ್ನದಾನೇಶ್ವರ ಮಠ ಆಶ್ರಯ, ದೇವರಾಜ್ ದೇಸಾಯಿ ಸಹಕಾರ
ಬಾಗಲಕೋಟೆಯ ಜೈ ನರೇಂದ್ರ ಯುವ ಜನ ಹಿತ ಸಂಸ್ಥೆ ಮತ್ತು ಶ್ರೀ ಅನ್ನದಾನೇಶ್ವರ ಮಹಾಸಂಸ್ಥಾನ, ಹಾಲಕೆರೆ-ಇಟಗಿ ಇವರ ಆಶ್ರಯದಲ್ಲಿ, ಶ್ರೀ ದೇವರಾಜ ದೇಸಾಯಿ ಇವರ ಸಹಯೋಗದೊಂದಿಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಉಚಿತ ಸೈನಿಕ ತರಬೇತಿ ನೀಡಲಾಗುತ್ತದೆ.
ಅಗಸ್ಟ 6 ರಿಂದ ಸಪ್ಟೆಂಬರ್ 5 ರವರೆಗೆ ಇಟಗಿಯ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಉಚಿತ ಕ್ಯಾಂಪ್ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆ
ಮತ್ತು ದಿವ್ಯಸಾನಿಧ್ಯ ಶ್ರೀ ಮ.ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಉಚಿತ ಕ್ಯಾಂಪ್ ಬಗ್ಗೆ ಮಾತನಾಡಿದ ಶ್ರೀಗಳು, ಗ್ರಾಮೀಣ ಭಾಗದ ಜನರಿಗೆ ಉಪಯುಕ್ತವಾಗಲಿದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉಚಿತ ಆರ್ಮಿಕೊಚಿಂಗ್ ಕ್ಯಾಂಪ್ ನ ಲಾಭ ಪಡೆಯಿರಿ ಎಂದರು. ಅಲ್ಲದೇ, ದೇಸಾಯಿ ಕುಟುಂಬ ಎಲ್ಲರಿಗೂ ಚಿರ ಪರಿಚಿತ ಅವರ ಬಗ್ಗೆ ಎಲ್ಲರಿಗೂ ಗೊತ್ತು ಎಂದು ಮ.ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ದೇವರಾಜ್ ದೇಸಾಯಿ ಮಾತನಾಡಿ, ಗ್ರಾಮೀಣ ಭಾಗದ ಜನರ ಏಳಿಗೆಗಾಗಿ ಇಂತಹ ಕಾರ್ಯಕ್ರಮ ನಡೆಯಬೇಕು. ನಾವು ಸಹ ಗ್ರಾಮೀಣ ಭಾಗದವರು. ಗ್ರಾಮೀಣ ಭಾಗದ ಜನರ ಸಮಸ್ಯೆ ಬಗ್ಗೆ ತಿಳಿದಿದೆ. ಜನರಿಗೆ ಅನುಕೂಲವಾಗುವ ಯಾವುದೇ ಕೆಲಸ ಇದ್ದರೂ, ನಮ್ಮ ಕುಟುಂಬ ಮಾಡಲಿದೆ ಎಂದು ಹೇಳಿದರು. ಇನ್ನೂ, ಸಾಮಾಜಿಕ ಕಾರ್ಯ ಮಾಡಬೇಕು ಅಷ್ಟೇ ಎಂದು ಹೇಳುತ್ತ ತಮ್ಮ ಪ್ರಚಾರ ಬಯಸುವುದಿಲ್ಲ ಎಂಬ ಭಾವನೆ ವ್ಯಕ್ತಪಡಿಸಿದರು. ಸುಮಾರು ನೂರು ಜನರಿಗೆ ಉಚಿತ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಉಚಿತ ಶಿಬಿರದ ಲಾಭ ಪಡೆಯಿರಿ ಎಂದರು. ಗಜೇಂದ್ರಗಡ ಮತ್ತು ರೋಣ ಭಾಗದ ಜನರಿಗೆ ಮೊದಲ ಆದ್ಯತೆ ನೀಡಲಾಗುವುದು ಎನ್ನುತ್ತಲೇ, ಈ ಶಿಬಿರ ಯಶಸ್ವಿಯಾದರೇ, ಮುಂಬರುವ ದಿನಗಳಲ್ಲಿ ಇದೇ ರೀತಿ ಮಹಿಳೆಯರಿಗೆ ಉಚಿತ ತರಬೇತಿ ನೀಡಲಾಗುತ್ತದೆ. ಮಹಿಳಾ ಆರ್ಮಿ ತರಬೇತಿ ಬಗ್ಗೆಯೂ ಮಾಹಿತಿ ನೀಡಿದ ದೇವರಾಜ್ ತಮ್ಮ ಸರಳತೆ ವ್ಯಕ್ತಪಡಿಸಿದರು.
ಹಾಲಕೆರೆ ಅನ್ನದಾನೇಶ್ವರ ಮಠದ ಸಹಯೋಗ ಎಂದಿಗೂ ಜನರ ಮೇಲಿದೆ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಮತ್ತು ಮಠದ ಪರಂಪರೆಯನ್ನ ಮೆಲುಕು ಹಾಕಿದರು.
ತರಬೇತುದಾರ ಮಾಜಿ ಸೈನಿಕರಾದ ಕೆ. ರಾಘವೇಂದ್ರ ಮಾತನಾಡಿ, ಈ ಕ್ಯಾಂಪ್ ನಡೆಸಲು ಸುಮಾರು ೧೦ ಲಕ್ಷ ರೂಪಾಯಿ ವ್ಯಯವಾಗಲಿದ್ದು, ಈ ಖರ್ಚು ವೆಚ್ಚವನ್ನ ದೇವರಾಜ ದೇಸಾಯಿ ಭರಿಸಲಿದ್ದಾರೆ ಎಂದು ತಿಳಿಸಿದರು. ಹಾಲಕೆರೆ ಮಠದ ಸಹಯೋಗದೊಂದಿಗೆ ಉಚಿತ ಆರ್ಮಿ ತರಬೇತಿ ನಡೆಯುತ್ತಿರುವುದು ಸಂತಸ ತಂದಿದೆ. ಸಮಾಜ ಸೇವೆ ಮಾಡುವ ಗುಣ ದೇಸಾಯಿ ಕುಟುಂಬಕ್ಕಿದೆ. ಮಠದ ಆಶ್ರಯ ದೊರೆತಿರುವುದು ಅತೀವ ಸಂತಸ ಎಂದು ಹೇಳಿದರು.
ವಿದ್ಯಾರ್ಹತೆ :
ಕನಿಷ್ಠ 10 ನೇ ತರಗತಿ, ೫೫% ನೊಂದಿಗೆ ಉತ್ತಿರ್ಣರಾಗಿರಬೇಕು.
ವಯಸ್ತು: -21, ಎತ್ತರ : 66 ಸೆಂ.ಮಿ, ಎದೆ ಸುತ್ತಳತೆ 77 ಸೆ.ಮಿ, ತೂಕ ಕನಿಷ್ಠ : 50 ಕೆ.ಜಿ, ಅಗ್ನಿವೀರ ಅರ್ಜಿ ಪಾರಂ ತರಬೇಕು.
ತರಬೇತಿ ವೇಳೆ ಊಟ, ವಸತಿ, ಸಮವಸ್ತ್ರ, ಮೆಡಿಕಲ್ ಟ್ರಿಟ್, ನೋಟ್ ಬುಕ್ ಮತ್ತು ಪೆನ್, ಬೇಸಿಕ್ ಕ್ಲಾಸ್, ಮೋಟಿವೇಟ್ ಕ್ಲಾಸ್, ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಶಿಬಿರಾರ್ಶಿಗಳು ಹೆಸರು ನೊಂದಾಯಿಸುವ ಸಮಯದಲ್ಲಿ ತಮ್ಮ ಆಧಾರ ಕಾರ್ಡ, ಮಾರ್ಕ್ಸ್ ಕಾರ್ಡ್, ಎಲ್ ಸಿ, 2ಪಾಸ್ ಪೋರ್ಟ್ ಸೈಜ್ ಫೋಟೋ ತರುವುದು ಕಡ್ಡಾಯ.
ಸಂಪೂರ್ಣ 30 ದಿನ ಶಿಜರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
ವಿದ್ಯಾರ್ಥಿಗಳು 3000/- ರೇವಣಿ ಹಣ ಪಾವರಿಪಬೇಕು. 30 ದಿನಗಳ ನಂತರ ಹಿಂದಿರುಗಿಸಲಾಗುವುದು.
ಶಿಬಿರಾರ್ಥಿಗಳು ಪಾಲಕರ ಒಪ್ಪಿಗೆ ಪತ್ರ ತರುವುದು ಕಣ್ಣಾಯ.
ಶಿಬಿರದ ಸಮುಯದಲ್ಲಿ ಯಾರದೇ ಬೆಲೆಬಾಳುವ ವಸ್ತುಗಳನ್ನು ತರುವಂತಿಲ್ಲ.
ಶಿಬಿರಾರ್ಥಿಗಳಗೆ 7 ದಿನಕ್ಕೊಮ್ಮೆ ದೈಹಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ ನಡೆಸಲಾಗುವುದು.
ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರುವವರಿಗೆ ಶಿಬಿರದಲ್ಲಿ ಅವಕಾಶ ವಿರುವುದಿಲ್ಲ.
Post a Comment