Gajendragad :
ದನಗಳ ಕಾಳಜಿ ಮಾಡಿ, ಜನರ ಹತ್ಯೆ ಮಾಡುತ್ತಿದೆ – DSS ಶರಣಪ್ಪ ಪೂಜಾರ್ ಗಂಭೀರ ಆರೋಪ
ದಲಿತ ಸಂಘರ್ಷ ಸಮಿತಿ ಗಜೇಂದ್ರಗಡ ತಾಲೂಕು ಶಾಖೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ದಲಿತ ಸಂಘರ್ಷ ಸಮಿತಿ ಗದಗ ಜಿಲ್ಲಾ ಸಂಚಾಲಕ ಶರಣಪ್ಪ ಪೂಜಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾ ಮತ್ತು ತಾಲೂಕು ಮುಖಂಡರು, ಸದಸ್ಯರು ಬಾಗವಹಿಸಿದ್ದರು.
ಗೋ ಹತ್ಯೆ ನಿಷೇದಕಾಯ್ದೆ ರದ್ಧತಿಗಾಗಿ ಆಗ್ರಹಿಸಿದರು. ಕೋಲಾರದಲ್ಲಿ ನಡೆದ ಮರ್ಯಾದಾ ಹತ್ಯೆ ಆರೋಪಿಗಳನ್ನ ಗಲ್ಲು ಶಿಕ್ಷೆ ಮತ್ತು ಮಧ್ಯಪ್ರದೇಶದಲ್ಲಿ ಬಿಕ್ಷುಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಬಂಧಿತ ಆರೋಪಿಯನ್ನ ಗಡಿಪಾರು ಮಾಡಲು ಒತ್ತಾಯಿಸಿದರು. ಹಾಗೂ ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಗೋ ಹತ್ಯೆ ನಿಷೇಧವನ್ನ ವಿರೋಧಿಸುತ್ತಲೇ ಬಂದಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ಹಿಂಪಡೆಯಬೇಕೆಂದು, ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಈ ವೇಳೆ, ಮಾತನಾಡಿದ ಜಿಲ್ಲಾ ಸಂಚಾಲಕ ಶರಣಪ್ಪ ಪೂಜಾರ್, ಜನರ ಸರ್ಕಾರ ಇದು, ಬದಲಾಗಿ ದನಗಳ ಸರ್ಕಾರ ವಲ್ಲ. ಬಿಜೆಪಿ ದನಗಳ ಬಗ್ಗೆ ಕಾಳಜಿ ವಹಿಸುವ ನಾಟಕ ಮಾಡಿ, ಜನರ ಹತ್ಯೆ ಮಾಡುತ್ತಿದೆ. ಡಾ. ಎಂ.ಎಂ ಕಲಬುರ್ಗಿ ಅವರ ಹತ್ಯೆಯಾದಾಗ ಹೋರಾಟ ಮಾಡಲಿಲ್ಲ. ದನಗಳನ್ನ ಕೊಂದರೆ ಹೋರಾಟ ನಡೆಯುತ್ತದೆ. ದಲಿತ ಸಂಘರ್ಷ ಸಮಿತಿ ಹಕ್ಕೊತ್ತಾಯ ಮಾಡುತ್ತದೆ. ಸರ್ವಜನಾಂಗದ ಶಾಂತಿಯ ತೋಟ. ಇಂತಹ ದೇಶದಲ್ಲಿ ದನಗಳ ಹೆಸರಿನಲ್ಲಿ ಜನರ ಮೇಲೆ ದೌರ್ಜನ್ಯ ಸಲ್ಲದು. ಸಂವಿಧಾನವನ್ನ ಅರ್ಥ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಶರಣು ಪೂಜಾರ್, ಬಸವರಾಜ್ ಕಡಬಿನ್, ಮರಿಯಪ್ಪ ಮಾದರ್, ಶರಣು ದೊಡ್ಡಮನಿ, ಹುಲ್ಲಪ್ಪ ತಳವಾರ್, ಬಿ.ಬಿ ಪೂಜಾರ್, ನೀಲಪ್ಪ ಗುಡಿಮನಿ, ಆನಂದ್ ಅರಳಿಗಿಡದ್, ಪ್ರಭು ನಿಡಗುಂದಿ, ಶುವು ಚವ್ಹಾಣ್, ಅಲ್ಲಾಭಕ್ಷಿ ಮುಚ್ಚಾಲಿ, ಹನುಮಂತ್ ಮೂಲಿಮನಿ, ಆನಂದ್ ಮಾದರ್, ಉಮೇಶ ರಾಠೋಡ ,ಶೀವು ಬೂಮದ, ರಜಾಕ್ ಡಾಲಾಯತ್.
ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
Post a Comment