Gajendragad :
ಸಿದ್ದಪ್ಪ ಬಂಡಿ 53ನೇ ಹುಟ್ಟುಹಬ್ಬ – ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ
ಶ್ರೀ ಸಿದ್ದಪ್ಪ ಗುರುಶಾಂತಪ್ಪ ಬಂಡಿ 53ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹೀಗಾಗಿ, ಸಿದ್ದಪ್ಪ ಬಂಡಿ ಅವರ ಅಭಿಮಾನಿಗಳ ಬಳಗದಿಂದ ಭಿನ್ನ ವಿಭಿನ್ನ ಸಾಮಾಜಿಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ. ಬಡವರಿಗೆ ಸಹಾಯವಾಗಲೆಂದು ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲರೂ, ಪಾರ್ಟಿ ಗಿರ್ಟಿ ಮಾಡಿ ಸಾವಿರಾರು ರೂಪಾಯಿ ಹಣವನ್ನ ಹಾಳುಮಾಡುವ ಇಂದಿನ ಯುಗದಲ್ಲಿ ಮಾದರಿ ಹುಟ್ಟುಹಬ್ಬದ ಮೂಲಕ ಹೊಸ ಆಯಾಮಕ್ಕೆ ನಾಂದಿ ಹಾಡಿದ್ದಾರೆ.
ಕಳೆದ ಬಾರಿ ಸರಳವಾಗಿ ಸಾಮಾಜಿಕ ಕಳಕಳಿಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗಿತ್ತು. ಈ ಬಾರಿ ಸಿದ್ದಪ್ಪ ಬಂಡಿ ಅಭಿಮಾನಿಗಳು ದೇಶದಲ್ಲಿ ರಕ್ತದ ಕೊರತೆಯಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಇದೆಲ್ಲವನ್ನ ನೋಡಿದ ಅಭಿಮಾನಿಗಳು ರಕ್ತದಾನಕ್ಕೆ ಮುಂದಾಗಿದ್ದಾರೆ. ದೇಶ ಸೇವೆ ಮಾಡಲು ಎಲ್ಲರಿಗೂ ಇದೊಂದು ಸದಾವಕಾಶವಾಗಿದೆ. ಸಾರ್ವಜನಿಕವಾಗಿ ರಕ್ತದಾನ ಶಿಬಿರದಲ್ಲಿ ಯುವಕರು ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ. ಕಳೆದ ಬಾರಿ ಶ್ರೀಮತಿ ವಿದ್ಯಾ ಬಂಡಿ, ಮತ್ತು ಪುತ್ರ ಅಕ್ಷಯ ಬಂಡಿ ಅವರನ್ನೊಳಗೊಂಡಂತೆ ಕುಟುಂಬ ಸದಸ್ಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯೂ ಸಹ ಕುಟುಂಬ ವರ್ಗ ರಕ್ತದಾನ ಶಿಬಿರದಲ್ಲಿ ಬಾಗವಹಿಸಲಿದ್ದಾರೆ. ಇನ್ನೂ, ಉಚಿತ್ರ ನೇತ್ರ ತಪಾಸಣಾ ಶಿಬಿರದಲ್ಲಿ ಗ್ರಾಮದಿಂದ ಬಂದ ವೃದ್ಧರು ಭಾಗವಹಿಸಿ, ಆರೋಗ್ಯ ತಪಾಸಣಾ ಶಿಬಿರದಿಂದ ಸಹಾಯವಾಗಿದೆ ಎಂದು ಕಳೆದ ಬಾರಿ ವೃದ್ಧರ ಕಣ್ತುಂಬಿ ಬಂಬಿ ಬಂದಿತ್ತು.
ಇದೇ ವೇಳೆ, ಬಡವರಿಗೆ ಹಣ್ಣು ಹಂಪಲುಗಳನ್ನ ಹಂಚಲಾಗಿತ್ತು. ಅಲ್ಲಿ ನೆರೆದವರಿಗೆ ಪ್ರಸಾದ ಸೇವೆಯೂ ಇತ್ತು. ಹೀಗಾಗಿ, ಮಾದರಿ ಹುಟ್ಟುಹಬ್ಬ ಆಚರಿಸಿ ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ.
ಸಿದ್ದಣ್ಣ ಬಂಡಿ ಅವರಿಗೆ ಕೆಲವರು ಅಣ್ಣ ಎಂದು ಮತ್ತೆ ಕೆಲವರು ತಂದೆ ಎಂದು ಸಹೋದರ ಎಂದು ಭಾವಿಸುತ್ತಾರೆ. ಯಾರಿಗಾದರೂ, ಸರಿ ಕಷ್ಟ ಎಂದು ಬಂದಾಗ, ಅವರ ಸಹಾಯಕ್ಕೆ ಧಾವಿಸುವ ಮೊದಲ ವ್ಯಕ್ತಿಯೇ ಸಿದ್ದಪ್ಪ ಬಂಡಿ. ಅವರನ್ನ ಫಾಲೋ ಮಾಡುವ ಯುವ ಜನರಿಗೆ ಆತ್ಮಿಯತೆಯಿಂದ ಕಾಣುತ್ತಾರೆ. ಮತ್ತೆ ಕೆಲವರಿಗೆ ಸಹೋದರನಂತೆ ಕಾಣುತ್ತಾರೆ.
ಸಿದ್ದಣ್ಣ ಬಂಡಿ ಅವರ ಮತ್ತೊಂದು ವಿಶೇಷ ಅಂದ್ರೆ, ಎಲ್ಲ ಸಮಾಜದ ಭಾಂದವರೊAದಿಗೂ ಅಷ್ಟೆ ಆತ್ಮಿಯತೆಯಿಂದ ಬೆರೆಯುತ್ತಾರೆ. ಮೇಲು ಕೀಳು ಎಂಬ ಭಾವನೆ ಅವರಲ್ಲಿಲ್ಲ. ಹೀಗಾಗಿ, ಅವರೊಬ್ಬ ಜನ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. 53ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿದ್ದಪ್ಪ ಬಂಡಿ ಅವರಿಗೆ, ಭಗವಂತ ಆರೋಗ್ಯದೊಂದಿಗೆ ಐಶ್ವರ್ಯ ಕರುಣಿಸಲಿ ಮತ್ತು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ. ಮತ್ತೊಮ್ಮೆ ಕಿರಾ ನ್ಯೂಸ್ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸಿದ್ದಪ್ಪ ಜಿ ಬಂಡಿ ಅವರಿಗೆ..
ಗಜೇಂದ್ರಗಡ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರಕ್ತದಾನ ಶಿಬಿರ ಉಚಿತ ನೇತ್ರ ತಪಾಸಣೆಯನ್ನ ಹಮ್ಮಿಕೊಳ್ಳಲಾಗಿದೆ. ಸಿದ್ದಪ್ಪ ಬಂಡಿ ಅವರ ಅಭಿಮಾನಿಗಳು ಪ್ರತಿ ವರ್ಷ ಅವರ ಹುಟ್ಟುಹಬ್ಬದಂದು ಸಾಮೂಹಿಕವಾಗಿ ರಕ್ತದಾನ ಮಾಡುತ್ತಾರೆ. ಜೊತೆಗೆ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಾರೆ ಎಂದು ಸಿದ್ದಪ್ಪ ಬಂಡಿ ಅಭಿಮಾನಿಗಳು ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಶೋಲ್ ಶೆಟ್ಟೃರ್, ಸುಭಾನ್ ಸಾಬ್ ಆರಗಿದ್ದಿ, ಸೋಮನಾಥ್ ಮೇರವಾಡೆ, ಪ್ರಭು ಚವಡಿ, ಮಲ್ಲಿಕಾರ್ಜುನ್ ಹಿರೇಕೊಪ್ಪ, ಮುತ್ತಣ್ಣ ಮ್ಯಾಗೇರಿ, ವಿರೇಶ್ ಸಂಗಮದ್, ಮಹೇಶ್ ಪಲ್ಲೇದ್, ಶಶೀಧರ್ ಒಕ್ಕಲರ್, ಶಿವು ಚವ್ಹಾಣ್, ವಿನಾಯಕ್ ಪಾಟೀಲ್, ಅಕ್ಷಯ್ ಜರ್ತಾರಿ, ಬಸವರಾಜ್ ರೇವಡಿ, ಕಂಡೆಪ್ಪ ಮಾತಿನವರ್, ಫರೋಜ್ ಅರಗಂಜಿ, ಬಸವರಾಜ್ ಕಡಬಿನ್, ರಫೀಕ್ ತೋರಗಲ್ಲ, ಸೇರಿದಂತೆ ಸಿದ್ದಪ್ಪ ಬಂಡಿ ಅವರ ಅಭಿಮಾನಿಗಳ ಬಳಗವೇ ಹಾಜರಿತ್ತು. ಸಾರ್ವಜನಿಕರಿಗೆ ಅನುಕೂಲ ವಾಗುವ ಕಾರ್ಯ ಮಾಡಲು ನಿರ್ಧರಿಸಿದ್ದೇವೆ. ಇದು ನಿಮ್ಮಹುಟ್ಟುಹಬ್ಬ ನಿಮ್ಮ ಮೂಲಕ ದೇಶ ಸೇವೆ ಮಾಡಲು ಸಹಕಾರಿ ಯಾಗಲಿದೆ ಎಂದು ಹೇಳಿದರು.
Post a Comment