Gajendragad :
ರಾತ್ರಿ 10.30 ಗಂಟೆ ವರೆಗೆ
ಆಧಾರ್ ಕಾರ್ಡ್ ತಿದ್ದುಪಡಿ : ಕಣ್ಮುಚ್ಚಿ ಕುಳಿತ ತಾಲೂಕು, ಜಿಲ್ಲಾಡಳಿ
ಗಜೇಂದ್ರಗಡದ ಬಿಎಸ್ ಎನ್ ಎಲ್ ಆಫೀಸ್ ನಲ್ಲಿ ರಾತ್ರಿ 10.30 ಗಂಟೆ ವರೆಗೆ ಆಧಾರ್ ಕಾರ್ಡ್ ಮಾಡಲಾಗುತ್ತಿದೆ. ಸೋಮವಾರ ನ್ಯೂಸ್ ಮುಗಿಸಿ ಮನೆಗೆ ತೆರಳುವಾಗ ಆಫೀಸ್ ಎದುರು ಬೈಕ್ ಗಳು ಕಂಡ್ವು. ಇದನ್ನ ಆಧರಿಸಿ, ಬಿ.ಎಸ್.ಎನ್.ಎಲ್ ಆಫೀಸ್ ಒಳಗೆ ಹೋದಾಗ ಸುಮಾರು ೧೦-೧೨ ಜನ ಇದ್ದರು.
ಆಧಾರ್ ತಿದ್ದುಪಡಿ, ಅಥವಾ ಹೊಸ ಆಧಾರ್ ಕಾರ್ಡ್ ಮಾಡಲು ಸಂಜೆ ೭ ಗಂಟೆ ಸಮಯ ನಿಗದಿ ಪಡಿಸಲಾಗಿದೆ. ಆದ್ರೆ, ಇಲ್ಲಿ ರಾತ್ರಿ 10.30ವರೆಗೂ ಆಧಾರ್ ಕಾರ್ಡ್ ತಿದ್ದುಪಡಿ, ಮತ್ತು ಹೊಸ ಆಧಾರ್ ಕಾರ್ಡ್ ಮಾಡಲಾಗುತ್ತಿದೆ. ಇದಕ್ಕೆ ಅವರು 300 ರಿಂದ 320 ರೂಪಾಯಿ ಪಡೆಯುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಹೆಚ್ಚಿನ ಹಣ ಪಡೆಯುತ್ತಾರೆ ಎಂಬುದಾಗಿ ಸಾರ್ವಜನಿಕರು ನಮಗೆ ಕರೆ ಮಾಡಿ, ಹೇಳಿದ್ದು, ಇದೆ.
ಕಳೆದ ತಿಂಗಳು ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದಾಗ ಇಲ್ಲಿ ಒಣ ರಗಳೆಗಳು ಹೆಚ್ಚಾಗಿದ್ವು. ವಿನಾಯಕ್ ಅಬ್ಬಿಗೇರಿ ಎಂಬ ಹುಡುಗ ಮಾಧ್ಯಮದವರ ಮೇಲೆ ದಬ್ಬಾಳಿಕೆಯಿಂದ ಮಾತನಾಡಿ, ನಾನು ಮಾಧ್ಯಮದಲ್ಲೆ ಕೆಲಸ ಮಾಡುತ್ತೇನೆ ಎಂದು ವಿಡಿಯೋ ಸಹ ಮಾಡಿದ್ದ ಈ ಭೂಪ. ಅಲ್ಲದೇ, ಸಿಎ ಪರೀಕ್ಷೆ ಬರೆದು ಬಂದಿದ್ದೇನೆ ಎಂದು ಸಹ ಹೇಳಿದ್ದ, ಅವರು ಸಿಎ ಪರೀಕ್ಷೆ ನಡೆಸಿದ್ದಾರೋ ಇಲ್ಲವೋ ತಿಳಿಯದಾಗಿದೆ.
ರಾತ್ರಿ 10.30 ರ ಬಳಿಕವೂ, ಬಿ.ಎಸ್.ಎನ್.ಎಲ್. ಆಫೀಸ್ ನಲ್ಲಿ ಕೆಲಸ ನಡೆಯುತ್ತಿದೆ.
ಜುಲೈ ೧೦ ರಾತ್ರಿ ೧೦.30 ಗಂಟೆಗೆ ವರೆಗೆ ಆಧಾರ್ ಕಾರ್ಡ್ ಮಾಡಲು ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆ ಸಹ ಎದುರಾಗಲಿದೆ. ಜೊತೆಗೆ ತಹಶೀಲ್ದಾರ್ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ತಿಳಿದಿಲ್ಲ. ಆದ್ರೆ, ಹಗಲು ದರೋಡೆ ಮಾಡುತ್ತಿರುವುದು ಮಾತ್ರ ಯಾರ ಕಣ್ಣಿಗೂ ಕಾಣಿಸದಾಗಿದೆ.
ಜಿಲ್ಲಾಡಳಿತ ಸಹ ಇವರಿಗೆ ಸಹಕರಿಸುವ ಹಾಗಿದೆ. ಇದೆಲ್ಲವೂ ಖುಲ್ಲಂಖುಲ್ಲಾ ನಡೆಯುತ್ತಿರುವುದು ಶೋಚನೀಯ ಸಂಗತಿ... ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲದಿದ್ದಲ್ಲಿ, ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಪಾಠಕಲಿಸುವ ದಿನಗಳು ಬಹಳ ದೂರ ವಿಲ್ಲ.
Post a Comment