Gadag : ಕಸಾಪ ಗದಗ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಮಾತೋಶ್ರೀ ವಿಧಿವಶ
ಗದಗ ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀ ವಿವೇಕಾನಂದಗೌಡ ಪಾಟೀಲ್ ಅವರ ಮಾತೋಶ್ರೀ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಸ್ವ ಗ್ರಹದಲ್ಲಿ ಕೊನೆಯುಸಿರೆಳೆದಿದ್ದಾರೆ. ೨೧/೭/೨೦೨೩ ರಂದು ಮಧ್ಯಾಹ್ನ ೧೧ ಗಂಟೆಗೆ ಕೆ. ಹಚ್.ಬಿ ಕಾಲೋನಿ, ಸಾಯಿಬಾಬಾ ದೇವಸ್ಥಾನದ ಹಿಂಬಾಗ, ವಿಜಯ ಕಲಾಮಂದಿರ ಹತ್ತಿರ... ಗದಗ ಸ್ವ ಗೃಹದಿಂದ ಗದಗ ಹೊಂಬಳ ನಾಕಾದಲ್ಲಿರುವ ರುದ್ರಭೂಮಿಗೆ ತೆರಳುವುದು...
ವಿವೇಕಾನಂದಗೌಡ ಪಾಟೀಲ್ ಅವರ ಕುಟುಂಬದಲ್ಲಿ ನಿರವ ಮೌನ ಆವರಿಸಿದೆ. ಅವರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಗಜೇಂದ್ರಗಡ ಕಸಾಪ ಅಧ್ಯಕ್ಷ ಎ.ಪಿ ಗಾಣಗೇರ್, ಶಾಸಕ ಜಿ.ಎಸ್. ಪಾಟೀಲ್, ಬಂಡಿ, ಶಿವರಾಜ್ ಘೋರ್ಪಡೆ, ಅಪ್ಪು ಮತ್ತಿಕಟ್ಟಿ, ಕರಿದುರಗನವರ್, ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಮಗ್ರ ಕಾಂಗ್ರೆಸ್ ಬಳಗವೇ ವಿವೇಕಾನಂದಗೌಡ ಪಾಟೀಲ್ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
Post a Comment