ಯೋಗದಿಂದ ಉತ್ತಮ ಆರೋಗ್ಯ : ವೀರೇಶ ಗಾಳಿ
ಮಾನವನಲ್ಲಿ ಉತ್ತಮ ಆರೋಗ್ಯ ಹೊಂದಲು ಯೋಗ ಸಹಾಯಕಾರಿಯಾಗಿದೆ. ವಿವಿಧ ರೀತಿಯ ಯೋಗಾಸನಗಳು ದೇಹದ ಶಕ್ತಿ ಹೆಚ್ಚಿಸುವುದರ ಜೊತೆಗೆ ಮಾನಸಿಕ ನೆಮ್ಮದಿ ನೀಡುವುದು ಎಂದು ಯೋಗ ತರಬೇತಿದಾರರಾದ ವೀರೇಶ ಗಾಳಿಯವರು ತಿಳಿಸಿದರು.
ಸ್ಥಳೀಯ ಬಿ ಎಸ್ ಎಸ್ ಸರ್ಕಾರಿ ಪ್ರಥಮ ದರ್ಜೆ ಮಹವಿದ್ಯಾಲಯದಲ್ಲಿ ಯೋಗ ಶಿಬಿರದ ಸದುಪಯೋಗ ಸಮಾರಂಭ ಹಾಗೂ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ದಿನಾಚರಣೆಯಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಅದ್ಯಾಪಕವೃಂದ ಭಾಗವಹಿಸಿದ್ದರು.
ಪ್ರಾಚಾರ್ಯರು ಮಹೇಂದ್ರ ಜಿ. ಮಾತನಾಡಿ, ಯೋಗದ ಮಹತ್ವದ ಕುರಿತು ಮಾಹಿತಿ ನೀಡಿದರು. ಮತ್ತೊಬ್ಬ ತರಬೇತಿದಾರ ಪ್ರೇಮನಾಥ್ ದಲಭಾಂಜನ್, ಅತಿಥಿಗಳಾಗಿ ಸುವಿಧ ಭಾಗಮಾರ್ ಹಾಗೂ ಮಹಾಂತೇಶ್ ಜೀ. ಹಿತೇಶ್ ಬಿ, ಸಿದ್ದೇಶ ಕೆ, ದೈಹಿಕ ನಿರ್ದೇಶಕ ಎಂ. ಜಿ .ಸೋಮನಕಟ್ಟಿ, ಡಾ.ಪ್ರಕಾಶ ಹುಲ್ಲೂರು, ವಿ ಎಂ ಜಾದವ್, ಮಾರುತಿ ಕಬ್ಬೇರ, ಡಾ. ಐ ಎನ್ ಹಾಳಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Post a Comment