-->
Bookmark

RAWಗೆ ನೂತನ ಸಾರಥಿ : ಹಿರಿಯ IPS ಅಧಿಕಾರಿ ರವಿ ಸಿಹ್ನಾ ಮುಖ್ಯಸ್ಥ

RAWಗೆ ನೂತನ ಸಾರಥಿ : ಹಿರಿಯ IPS ಅಧಿಕಾರಿ ರವಿ ಸಿಹ್ನಾ ಮುಖ್ಯಸ್ಥ 

ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ಅವರನ್ನು ದೇಶದ ಹೊರಗಡೆ ಗೂಢಚರ್ಯೆ ನಡೆಸುವ ಭಾರತದ 'ರಾ' ಏಜನ್ಸಿಯ (Research and Analysis Wing-RAW) ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಸೋಮವಾರ ನೇಮಿಸಿದೆ.

ಇದೇ ಜೂನ್ 30ಕ್ಕೆ ಆ ಹುದ್ದೆಯಿಂದ ನಿರ್ಗಮಿಸಲಿರುವ ಸಮಂತ್ ಕುಮಾರ್ ಗೋಯೆಲ್ ಅವರ ಸ್ಥಾನವನ್ನು ಸಿನ್ಹಾ ತುಂಬಲಿದ್ದಾರೆ.

ರವಿ ಸಿನ್ಹಾ ಅವರು 1988 ನೇ ಬ್ಯಾಚ್‌ನ ಛತ್ತೀಸಗಢ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾರೆ. ಜೂನ್ 30 ರಿಂದ ಅವರು ಎರಡು ವರ್ಷ 'ರಾ' ಏಜನ್ಸಿಯ ಮುಖ್ಯಸ್ಥರಾಗಿರಲಿದ್ದಾರೆ.

ಸಿನ್ಹಾ ಅವರು ಈಗಾಗಲೇ ಎರಡು ದಶಕಗಳ ಕಾಲ 'ರಾ' ಏಜನ್ಸಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
Post a Comment

Post a Comment