ಇನ್ನೂ, ಉತ್ತರ ಕರ್ನಾಟಕದ ಭಾಷೆಯನ್ನ ಬಹುತೇಕ ಸಿನೆಮಾಗಳಲ್ಲಿ ಕೇವಲ ಕಾಮೆಡಿ ಯಾಗಿ ಬಳಸುತ್ತಾರೆ. ಇದು ಪ್ರೇಕ್ಷಕರನ್ನ ಸೆಳೆಯುತ್ತವೆ.
ಇತ್ತ, ಉತ್ತರ ಕರ್ನಾಟಕದವರು ರಂಗದಲ್ಲಿ ಅದೃಷ್ಟ ಕಂಡುಕೊಂಡಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಉತ್ತರ ಕರ್ನಾಟಕದವರು ಸಾಂಡಲವೂಡ್ ಗೆ ತೆರಳುವವರು ಕಡಿಮೆ. ಇತ್ತೀಚೇಗೆ ಕೆಲ ಯುವಕರು, ಹೊಸದಾಗಿ ತಂಡ ಕಟ್ಟಿ, ಯುವ ಸಮುದಾಯವನ್ನ ಸಿನೆಮಾ ಥಿಯೇಟರ್ ಗೆ ಕರೆತರುವಲ್ಲಿ ಯಶಸ್ವಿಯಾದ ಚಿತ್ರ ಎಂದರೆ, ಅದು ನನ್ನಾಕಿ...
ನನ್ನಾಕಿ ಸಂಪೂರ್ಣ ಹಳ್ಳಿ ಸಿಗಡಿನ ಚಿತ್ರ. ಕೇವಲ ಹೊರೋ, ಹಿರೋ ಇನ್ ಸುತ್ತಲೇ ಗಿರಕಿ ಹೊಡೆಯುವ ಕಥೆ ಹೊಂದಿದ್ದರೂ, ಕೌಟುಂಬಿಕ ಚಿತ್ರ ಇದಾಗಿದೆ.
ಕಮರ್ಷಿಯಲ್ ಸಿನೆಮಾ ಆದ್ರೂ, ಕುಟುಂಬ ಸಮೇತರಾಗಿ ಸಿನೆಮಾ ನೋಡುವಾಗ ಹಿರೋಯಿನ್ ಅಥವಾ ಸಹ ನಟರ ತುಂಡು ಬಟ್ಟೆಯಿಂದ ಆಗುವ ಮುಜುಗರ ಇಲ್ಲಿ ಸಿಗಲ್ಲ.
ಯುವ ಸಮೂಹದ ಸ್ನೇಹಿತರ ನಡುವೆ ನಡೆಯುವ ದಿನ ನಿತ್ಯದ ಹಾಸ್ಯ ಚಟಾಕೆ ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಬಡ ಮಾಧ್ಯಮ ಕುಟುಂಬದಲ್ಲಿ ನಡೆಯುವ ಬದುಕನ್ನ ತೆರೆ ಮೇಲೆ ತರಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಮತ್ತು ಹೀರೊ ಮಲ್ಲು ಜಮಖಂಡಿ..
ಚಿತ್ರದಲ್ಲಿನ ಸಂಗೀತ ಕೂಡ ಯುವ ಸಮೂಹವನ್ನ ಚಿತ್ರ ನೋಡಲು ಕರೆತರುವಂತಿದೆ. ಅನೀಕ್ ಸಿಜೆ ಸಂಗೀತ ಮತ್ತು ಕೈಲಾಶ್ ಖೇರ್ ಅವರು ಹಾಡಿರುವ ಹಾಡು, ನೋಡುಗರನ್ನ ಮಂತ್ರ ಮುಗ್ದರನ್ನಾಗಿಸುತ್ತದೆ.
ಹೊಸಬರ ತಂಡ ಕೇವಲ ಐ ಫೋನ್ ಬಳಸಿ ಚಿತ್ರಿಜರಣ ಮಾಡಿದ್ದಾರೆ. ಕಿರು ಚಿತ್ರ ಮಾಡಲು ಹೋಗಿ, ಒಂದು ಸಿನೆಮಾ ರೂಪ ಪಡೆದಿದ್ದು, ನಮಗರ ಆಶ್ಚರ್ಯವಾಗಿದೆ ಎಂದು ಚಿತ್ರ ತಂಡ ಹೇಳಿದ್ದು, ಈಗ ಇತಿಹಾಸ...
ಹಳ್ಳಿಯಲ್ಲಿ ಬೆಳೆದ ಯುವ ಸಮೂಹಕ್ಕೆಂದೆ ಈ ಚಿತ್ರದ ಕಥೆ ಹೆಣೆಯಲಾಗಿದೆ. ಯೂಟ್ಯೂಬ್ ನಲ್ಲಿ ಕಾಮೆಡಿಗೆ ಹೆಸರಾಗಿರುವ ಮಲ್ಲು ಜಮಖಂಡಿ ಚಿತ್ರದ ಬಹುತೇಕ ಜವಾಬ್ದಾರಿ ಹೊತ್ತಿದ್ದಾರೆ. ಹೊಸಪೇಟೆಯ ಶಿವಗಂಗಾ ಚಿತ್ರದ ನಾಯಕಿಪಾತ್ರದಲ್ಲಿ ಮಿಂಚಿದ್ದಾರೆ. ನನ್ನಾಕಿ ಸಿನೆಮಾ ಟೈಟಲ್ ಆದ್ರೂ, ಜೀವಾ ಇರೋಮಟ ಜೊತೆಗಿರಾಗಿ ಎಂಬ ಟ್ಯಾಗ್ ಲೈನ್ ವಿಭಿನ್ನವಾಗಿದೆ.
ಈ ಚಿತ್ರಕ್ಕೆ ಯಾವುದೇ ಲೈಟಿಂಗ್ ಬಳಸದೆ ಚಿತ್ರಿಕರಣ ಮಾಡಿರುವುದು ಮತ್ತೊಂದು ವಿಶೇಷ...
ಹೊಸಬರು ಮಾಡಿರುವ ಚಿತ್ರ ಬಹುತೇಕ ಚಿತ್ರ ಯಶಸ್ವಿಯಾಗಿದ್ದು, ಮುಂಬರುವ ಉತ್ತರ ಕರ್ನಾಟಕದ ಸೊಗಡಿನ ಚಿತ್ರಗಳು ಮತ್ತಷ್ಟು ಬರಲಿ... ಸಾಂಡಲವೂಡ್ ನಲ್ಲಿ ಮಲ್ಲು ಜಮಖಂಡಿ ಮತ್ತು ಶಿವಗಂಗಾ ಯಶಸ್ಸು ಕಾಣಲಿ ಎಂದು ಹಾರೈಸೋಣ...!!!!
ವರದಿ : Team KIRA
Post a Comment