JT CBSE PU ಕಾಲೇಜಿನಲ್ಲಿ ವಿಶ್ವ ಯೋಗ ದಿನ
Gajendragad :
ಪತಂಜಲಿ ಯೋಗ ಸಮಿತಿ ಮತ್ತು ಜಗದ್ಗುರು ತೋಂಟದಾರ್ಯ, ಸಿ.ಬಿ.ಎಸ್.ಇ ಹಾಗೂ ಪಿ.ಯು. ಕಾಲೇಜು ಗಜೇಂದ್ರಗಡ ಸಂಸ್ಥೆಗಳ ಸಹಯೋಗದಲ್ಲಿ ದಿ. 21-06-2023 ಬುಧವಾರ ಬೆಳಿಗ್ಗೆ ಮಹಾವಿದ್ಯಾಲಯದ ಪ್ರಾಂಗಣದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಯೋಗಾಸನದ ಅಭ್ಯಾಸದ ಮೂಲಕ ನಾವು ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಪಡೆಯಬಹುದು. ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಮಾಡುವ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಬೆಳೆಸಿಕೊಳ್ಳಿ ಎಂದು ಸಂಚಾಲಕ ಪ್ರಕಾಶ್ ಬಾಕಳೆ ಯೋಗದ ಭಂಗಿಗಳ ಬಗ್ಗೆ ವಿವರಣೆ ನೀಡಿದರು.
ಒಂದೂವರೆ ಗಂಟೆ ನಡೆದ ಕಾರ್ಯಕ್ರಮದಲ್ಲಿ 1045 ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು, ಹತ್ತಾರು ಯೋಗ ಭಂಗಿಗಳನ್ನು ಪ್ರದರ್ಶಿಸಿ, ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೋಧಕ, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
Post a Comment