Gajendragad :
ಮಳೆಗಾಗಿ ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ
ಗಜೇಂದ್ರಗಡದ ಮುಸ್ಲಿಂ ಬಾಂಧವರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಂಜುಮನ್ ಇಸ್ಲಾಂ ಕಮಿಟಿ ನೇತೃತ್ವ ವಹಿಸಿತ್ತು. ಬಕ್ರೀದ್ ಹಬ್ಬದಂದು ಸಹ ಪ್ರಾರ್ಥನೆ ಸಲ್ಲಿಸಿದ್ದರು. ಇನ್ನೂ, ಶುಕ್ರವಾರ ಎಂದಿನ ಪ್ರಾರ್ಥನೆ ಬಳಿಕ ಇದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯದೆಲ್ಲೆಡೆ ಮಳೆ ಇಲ್ಲದೇ, ರೈತರು ಸೇರಿದಂತೆ ಎಲ್ಲರು ಕಂಗಾಲಾಗಿದ್ದಾರೆ. ಕೆಲವೆಡೆ, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಹೀಗಾಗಿ, ಮಳೆಗಾಗಿ ಕುರಾನಿನಲ್ಲಿ ವಿಶೇಷ ಪ್ರಾರ್ಥನೆಗೆ ಅವಕಾಶ ಇದೆ. ಮಳೆ ಬೀಳಲಿ, ಬರಗಾಲದಿಂದ ಬಳಲದಿರಲಿ. ಮಳೆ ತರಿಸು ಸೃಷ್ಟಿಕರ್ತನೆ ಎಂದು ಮುಸ್ಲಿಂ ಬಾಂಧವರು ಪ್ರಾರ್ಥಿಸಿದರು.
ಅನಾಚಾರದಿಂದ ನಡೆದುಕೊಳ್ಳುತ್ತೇವೆ. ನಾವೇ ತಪ್ಪು ಮಾಡುತ್ತಿದ್ದೇವೆ. ನಮ್ಮ ತಪ್ಪನ್ನ ಕ್ಷಮಿಸು ಭಗವಂತ. ನನ್ನಿಂದಾದ ತಪ್ಪುಗಳನ್ನ ಮನ್ನಿಸು ಎಂದು ಪಶ್ಚಾತ್ತಾಪ ಪಡಬೇಕು. ಅಲ್ಹಾಹ ನಮ್ಮ ಮೇಲೆ ಕರುಣೇ ತೋರು ಎಂದು ಅಲ್ಹಾನಲ್ಲಿ ಪ್ರಾರ್ಥಿಸಿದರು.
Post a Comment