ಕಲಾಲ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ : ಜಿ.ಎಸ್ ಪಾಟೀಲ್
ಗಜೇಂದ್ರಗಡ :
ಆಟವಾಡುತ್ತ ವಿದ್ಯುತ್ ಕಂಬಕ್ಕೆ ಮುಟ್ಟಿದ್ದರಿಂದ ಸಾವನ್ನಪ್ಪಿದ್ದ ೯ ವರ್ಷದ ಬಾಲಕನ ಮನೆಗೆ ಶಾಸಕ ಜಿ.ಎಸ್ ಪಾಟೀಲ್ ಭೇಟಿ ನೀಡಿದ್ರು. ರವಿ ಕಲಾಲ್ ಕುಟುಂಬಕ್ಕೆ ಸಾಂತ್ವನ ಹಳಿದ್ರು. ೯ ವರ್ಷದ ಮಗನನ್ನ ಕಳೆದುಕೊಂಡ ರವಿ ಕಲಾಲ್ ಕುಟುಂಬದಲ್ಲಿ ನಿರವ ಮೌನ ಆವರಿಸಿತ್ತು. ಒಬ್ಬನೇ ಮಗನಾಗಿದ್ದ ಪಂಕಜ್ ನನ್ನ ಕಳೆದುಕೊಂಡ ತಾಯಿ ಕಂಗಾಲಾಗಿದ್ದಾರೆ. ಕುಟುಂಬದಲ್ಲಿ ನಿರವ ಮೌನ ಆವರಿಸಿದೆ. ಈ ಕುಟುಂಬಕ್ಕೆ ಭಗವಂತ ಆ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ಕರುಣಿಸಲಿ ಎಂದು ಶಾಸಕ ಜಿಎಸ್ ಪಾಟೀಲ್ ದೇವರಲ್ಲಿ ಪ್ರಾರ್ಥಿಸಿದ್ರು.
ಸೋಮವಾರ ಸಂಜೆ ಗಜೇಂದ್ರಗಡದ ಚನ್ನಮ್ಮ ಸರ್ಕಲ್ ಬಳಿಯ ಅಪ್ಪು ಮತ್ತಿಕಟ್ಟಿ ಅವರ ಶಾಲೆಯ ಎದುರು ಈ ಘಟನೆ ನಡೆದಿತ್ತು.
ಜಿ.ಎಸ್ ಪಾಟೀಲ್ ಅವರೊಂದಿಗೆ ಮುಖಂಡರಾದ ಸಿದ್ದಪ್ಪ ಬಂಡಿ, ಗಜೇಂದ್ರಗಡ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಶಿವರಾಜ್ ಘೋರ್ಪಡೆ, ಪ್ರತಿಪಕ್ಷ ನಾಯಕ ಮುರ್ತುಜಾ ಡಾಲಾಯತ್, ಅಪ್ಪು ಮತ್ತಿಕಟ್ಟಿ ಸೇರಿದಂತೆ ಅನೇಕರು ಜಿ.ಎಸ್ ಪಾಟೀಲ್ ಅವರೊಂದಿಗಿದ್ರು.
Post a Comment