Gajendragad :
ಯೋಗವೂ ಪ್ರಾಚೀನ ಸಂಸ್ಕತಿಯ ಪ್ರತೀಕ: ಸೀತಲ ಓಲೇಕಾರ.
ಗಜೇಂದ್ರಗಡ :
ಯೋಗವು "ವಸುಧೈವ ಕುಟುಂಬಕಂ" ಎಂಬ ಪರಿಕಲ್ಪನೆಯನ್ನು ಉತ್ತೇಜಿಸುತ್ತದೆ, ಇದರರ್ಥ ಯೋಗವು ಎಲ್ಲರ ಕಲ್ಯಾಣಕ್ಕಾಗಿ ಆಗಿದೆ ಎಂಬುದಾಗಿದೆ ಎಂದು ಮುಖ್ಯೋಪಾಧ್ಯಾಯ ಸೀತಲ ಓಲೇಕಾರ ಹೇಳಿದರು.
ನಗರದ ಶ್ರೀ ವಿಜಯ ಮಹಾಂತೇಶ ಕನ್ನಡ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ದೈನಂದಿನ ಜೀವನಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಯೋಗಾಭ್ಯಾಸ ದೇಹದೊಂದಿಗೆ ಮನಸ್ಸು ಮತ್ತು ಆತ್ಮವನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ ಯೋಗಾಭ್ಯಾಸ ದೇಹದೊಂದಿಗೆ ಮನಸ್ಸು ಮತ್ತು ಆತ್ಮವನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದರು.
ಬೆಳ್ಳಂಬೆಳಗ್ಗೆ ಮಕ್ಕಳು ಸೇರಿದಂತೆ ಶಾಲಾ ಸಿಬ್ಬಂದಿಗಳು ಯೋಗ ಮಾಡುವ ಮೂಲಕ ಆರೋಗ್ಯದ ಮಹತ್ವ ಸಾರಿದರು.
ಇದೇ ಸಂದರ್ಭದಲ್ಲಿ ಶಾಲೆಯ ಬೋಧಕ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಮುದ್ದು ವಿದ್ಯಾರ್ಥಿಗಳು ಇದ್ದರು.
Post a Comment