-->
Bookmark

Bagalakote : ಅಂಗನವಾಡಿ ನೌಕರರಿಗೆ ವೇತನ ಪರಿಷ್ಕರಿಸಿ : ಮಂಜುಳಾ ಪಾಟೀಲ್ ಮೌಖಿಕ ಮನವಿ

ಅಂಗನವಾಡಿ ನೌಕರರಿಗೆ ವೇತನ ಪರಿಷ್ಕರಿಸಿ : ಮಂಜುಳಾ ಪಾಟೀಲ್ ಮೌಖಿಕ ಮನವಿ 

ಬಾಗಲಕೋಟೆ : 
ಅಂಗನವಾಡಿ ನೌಕರರಿಗೆ ನೀಡಿದ ಭರವಸೆ ಈಡೇರಿಸುವಂತೆ ಬಾಗಲಕೋಟೆಯ ಅಂಗನವಾಡಿ ನೌಕರರ ಸಂಘದ ಲೀಡರ್ ಮಂಜುಳಾ ಪಾಟೀಲ್ ನೇತೃತ್ವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನ ಮೌಖಿಕವಾಗಿ ಮನವಿ ಮಾಡಿದ್ರು.
ಬೆಳಗಾವಿಯಲ್ಲಿರುವ ಅವರ ಸ್ವ 
ಗ್ರಹದಲ್ಲಿ ಭೇಟಿಯಾಗಿ ಸನ್ಮಾನಿಸಿದರು. ಬಳಿಕ ಅಂಗನವಾಡಿ ನೌಕರರಿಗೆ ಭರವಸೆ ನೀಡಿದ್ದನ್ನ ಸ್ಮರಿಸಿದ್ರು. ಈ ವೇಳೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್, ನಿಮ್ಮ ಬೇಡಿಕೆಯನ್ನ ಈಡೇರಿಸುವ ಕುರಿತು ಚರ್ಚೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ರು. ಜೊತೆಗೆ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಅಭಯ ಹಸ್ತವನ್ನ ನೀಡಿದ್ದಾರೆ ಎಂದು ಮಂಜುಳಾ ಪಾಟೀಲ್ ಹೇಳಿದ್ದಾರೆ. 

ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು, ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ  ಹೇಳಿದ್ದೇವೆ ಎಂದರು. 
ಚುನಾವಣಾ ಪೂರ್ವದಲ್ಲಿ ಅಂಗನವಾಡಿ ನೌಕರರ ವೇತನ ೧೫ ಸಾವಿರ ಮಾಡುವುದಾಗಿ ಭರವಸೆ ನೀಡಿತ್ತು. ಈಗ ೫ ಗ್ಯಾರಂಟಿಗಳ ಈಡೇರಿಕೆಗಾಗಿ ಸರ್ಕಾರ ಪರಸಾಡುತ್ತಿದೆ. ಅಕ್ಕಿ ಖರೀದಿ ಕಸರತ್ತು ಒಂದೆಡೆ ನಡೆಯುತ್ತಿದೆ. ಮತ್ತೊಂದೆಡೆ, ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಸಿದ್ಧತೆ  ನಡೆದಿದೆ. 

ಈಗ ಅಂಗನವಾಡಿ ನೌಕರರ ಬೇಡಿಕೆ ಈಡೇರುವುದೇ ಎಂಬುದನ್ನ ಕಾದು ನೋಡಬೇಕಿದೆ.
Post a Comment

Post a Comment