-->
Bookmark

Anekal : ಪ್ರೀತಿಸಲು ನಿರಾಕರಿಸಿದ ವಿವಾಹಿತೆ : ಭಗ್ನ ಪ್ರೇಮಿಯಿಂ ಚಾಕು ಇರಿತ, ತಾನೂ ಆತ್ಮ ಹತ್ಯೆಗೆ ಯತ್ನ


Anekal : 

ಪ್ರೀತಿಸಲು ನಿರಾಕರಿಸಿದ ವಿವಾಹಿತೆ : ಭಗ್ನ ಪ್ರೇಮಿಯಿಂ ಚಾಕು ಇರಿತ, ತಾನೂ ಆತ್ಮ ಹತ್ಯೆಗೆ ಯತ್ನ 

ಮಹಿಳೆಯನ್ನು ಯುವಕನೊಬ್ಬ ಶುಕ್ರವಾರ ಚಾಕುವಿನಿಂದ ಚುಚ್ಚಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಮಿಳುನಾಡಿನ ಹೊಸೂರು ಮೂಲದ ಮಿಥುನ್ ಎಂಬ ಯುವಕನೇ ಈ ಹುಚ್ಚು ಪ್ರೇಮಿ.

ಆರೋಪಿ ಮಿಥುನ್ ಆನೇಕಲ್‌ನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದ. ಆದರೆ, ಇದಕ್ಕೆ ಎರಡು ಮಕ್ಕಳ ತಾಯಿಯಾಗಿದ್ದ ಮಹಿಳೆ ನಿರಾಕರಿಸಿದ್ದಳು. ಜತೆಗೆ, ಪ್ರೀತಿ ಮಾಡಲು ಸಾಧ್ಯವಿಲ್ಲ ಎಂದು ಹಲವು ಬಾರಿ ಮಿಥುನ್‌ಗೆ ತಿಳಿಸಿದ್ದಳು.

ಇಷ್ಟಾದರೂ ತನ್ನ ನಡವಳಿಕೆಯನ್ನು ಬದಲಿಸಿಕೊಳ್ಳದ ಮಿಥುನ್ ಕುರಿತು ಮಹಿಳೆ ಕುಟುಂಬಸ್ಥರು, ಹೊಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗೆ ಎಚ್ಚರಿಕೆ ನೀಡಲಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ಆರೋಪಿಯು, ಶುಕ್ರವಾರ ಪಟ್ಟಣದ ಬಹದ್ದೂರ್ ಪುರದ ಮಹಿಳೆ ಮನೆಯಲ್ಲಿ ಯಾರು ಇಲ್ಲದ್ದಾಗ ಬಂದು, ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಜತೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಸುತ್ತಮುತ್ತಲ ಜನರು ಜಮಾವಣೆಗೊಂಡು ಗಾಯಗೊಂಡಿದ್ದ ಮಹಿಳೆ ಮತ್ತು ಆರೋಪಿಯನ್ನು ಅನೇಕಲ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
Post a Comment

Post a Comment